ಪ್ರಭಾಬತಿ ಬೋಸ್ ( ನೀ ದತ್ತಾ ) ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕಾರಣಿ. ಅವರು ೧೮೬೯ ರಲ್ಲಿ ಕಲ್ಕತ್ತಾ ಉತ್ತರದಲ್ಲಿರುವ ಹತ್ಖೋಲಾದ ಗೌರವಾನ್ವಿತ ಕಾಯಸ್ಥ ಭಾರದ್ವಾಜ ಕುಲದ ದತ್ತ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ತಾಯಿ ಗಂಗನಾರಾಯಣ ದತ್ತಾ ಮತ್ತು ಕಮಲಾ ಕಾಮಿನಿ ದತ್ತಾ. ಪ್ರಭಾಬತಿ ಬೋಸ್ ಅವರು ತನ್ನ ತಂದೆ ತಾಯಿಯ ಹಿರಿಯ ಮಗಳು. ಅವರ ತಂದೆ ತಾಯಿ ಕಾಶಿನಾಥ್ ದತ್ತಾ ರಸ್ತೆ, ಬಾರಾನಗೋರ್ ( ಕಲ್ಕತ್ತಾದ ಉಪನಗರ), ಭಾರತದಲ್ಲಿ ವಾಸಿಸುತಿದ್ದರು. ೧೮೮೦ ರಲ್ಲಿ, ತನ್ನ ೧೧ ನೇ ವಯಸ್ಸಿನಲ್ಲಿ, ಕೋಡಾಲಿಯಾ ( ಸೋನಾರ್‌ಪುರ ಬಳಿ ಇದೆ) ಗ್ರಾಮದ ಕುಲಿನ್ ಬೋಸ್ ಕುಟುಂಬದಿಂದ ಬಂದ ಜಾನಕಿನಾಥ್ ಬೋಸ್ ಅವರನ್ನು ವಿವಾಹವಾದರು. == ಮದುವೆ ಮತ್ತು ಮಕ್ಕಳು == ಪ್ರಭಾಬತಿ ಮತ್ತು ಜಾನಕಿನಾಥ್ ಬೋಸ್ ಒಟ್ಟಿಗೆ ಹದಿನಾಲ್ಕು ಮಕ್ಕಳನ್ನು ಹೊಂದಿದ್ದರು. ಅವರು ತಮ್ಮ ಶಿಕ್ಷಣದಲ್ಲಿ ತುಂಬಾ ತೊಡಗಿಸಿಕೊಂಡಿದ್ದರು ಮತ್ತು ವಿಸ್ತೃತ ಬೋಸ್ ಕುಟುಂಬದ ಅನೇಕ ಸದಸ್ಯರು ಭಾರತೀಯ ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಭಾಬತಿ ಬೋಸ್ ಕುಟುಂಬದ ಮಾತೃಪ್ರಧಾನಿ ಮಾತ್ರವಲ್ಲ, ಆಕೆಯ ಹೆತ್ತವರ ಮರಣದ ನಂತರ ಅವಳು ಮತ್ತು ಅವಳ ಪತಿ ತನ್ನ ಕಿರಿಯ ಸಹೋದರರನ್ನು ನೋಡಿಕೊಂಡರು. ಅವರು ಹದಿನಾಲ್ಕು ಮಕ್ಕಳಲ್ಲಿ, ಆರು ಹೆಣ್ಣುಮಕ್ಕಳು ಮತ್ತು ಎಂಟು ಗಂಡು ಮಕ್ಕಳಿಗೆ ಜನ್ಮ ನೀಡಿದರು, ಅವರಲ್ಲಿ ರಾಷ್ಟ್ರೀಯವಾದಿ ನಾಯಕ ಶರತ್ ಚಂದ್ರ ಬೋಸ್, ನೇತಾಜಿ ಸುಭಾಸ್ ಚಂದ್ರ ಬೋಸ್ ಮತ್ತು ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸುನಿಲ್ ಚಂದ್ರ ಬೋಸ್ ಇದ್ದರು. == ರಾಜಕೀಯ ಕ್ರಿಯಾಶೀಲತೆ == ೧೯೨೮ ರಲ್ಲಿ, ಪ್ರಭಾಬತಿ ಮಹಿಳಾ ರಾಷ್ಟ್ರೀಯ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. == ಉಲ್ಲೇಖಗಳು ==